ಇತ್ತೀಚಿನ ದಿನಗಳಲ್ಲಿ ಮನುಷ್ಯರನ್ನು ಕಾಡುವಂತಹ ವಿವಿಧ ರೋಗಗಳಲ್ಲಿ ಅನೇಕವು ನಿರ್ದಿಷ್ಟ diagnosis ನ್ನು ಹೊಂದಿರುವುದಿಲ್ಲ. ರೋಗದ ಅಂತಿಮ ಗುರಿ ಯಾವ ಅಂಗ ಎಂಬುದು ತಿಳಿಯುವುದು ಕಷ್ಟವಾಗುತ್ತಿವೆ. ಯಾಂತ್ರೀಕೃತ ಜೀವನಶೈಲಿ ಮತ್ತು ಸಮಯದ ಒತ್ತಡದಲ್ಲಿ ಮಹತ್ವಾಕಾಂಕ್ಷಿ ಪ್ರವ್ರತ್ತಿಯಿಂದ ಸಂಪತ್ತು, ಆಸ್ತಿ,ಅಧಿಕಾರ, ಸ್ಥಾನಮಾನ ಇತರ ಲೌಕಿಕ ವಸ್ತುಗಳ ಪ್ರಲೋಭನೆಯಿಂದ ಕೂಡಿ ಅವನ್ನು ವಶಪಡಿಸಿಕೊಳ್ಳಲು ಹೆಣಗುತ್ತಿರುವ ಜೀವ ಚೈತನ್ಯ ಶಕ್ತಿಯು ತನ್ನ ಅಸಾಹಯಕತೆಯನ್ನು ತೋರ್ಪಡಿಸುವ ವಿಧಾನವೇ ಮನೋದೈಹಿಕ ತೊಂದರೆಗಳು. ಮನಸ್ಸಿನ ಮೂಲ ಭಾವನೆಗಳಾದ ಪ್ರೀತಿ, ಹಗೆತನ, ಕ್ರೋಧ, ಖಿನ್ನತೆ, ಅಸೂಯೆ,ಸಂಶಯ ಗಳು ಸಮತೋಲನೆ ಕಳಕೊಂಡಾಗ ವ್ಯತಿರಿಕ್ತ ಭಾವನೆಗಳು ಮನಸ್ಸಿನಲ್ಲಿಯೇ ಬ್ರಹದಾಕಾರವಾಗಿ ಬೆಳೆದು ಹೆದರಿಕೆಯಿಂದ ಅಂತಹ ಸನ್ನಿವೇಶದಿಂದ ಹಿಂಜರಿಯಬಹುದು ಅಥವಾ ಧೈರ್ಯದಿಂದ ಎದುರಿಸಬಹುದು. ಆದರೆ ಸಂಧಿಗ್ಧ ಪರಿಸ್ಥಿತಿ ನಿರ್ಮಾಣವಾದರೆ ಒಂದೋ ಮಾನಸಿಕ ಖಾಯಿಲೆಯಾಗಿಯೊ ಅಥವಾ ಮನೋದೈಹಿಕ ಖಾಯಿಲೆಯಾಗಿಯೋ ಆಗಿ ಪರಿವರ್ತಿತಗೊಳ್ಳುತ್ತವೆ.
ಮನೋದೈಹಿಕ ಕಾಯಿಲೆಗಳ ವಿಶೇಷವೆಂದರೆ ಅವು ದೈನಂದಿನ ಕೆಲಸಕಾರ್ಯಗಳಲ್ಲಿ ವ್ಯಕ್ತಿಯ ಪೂರ್ಣಪ್ರಮಾಣದ ವ್ಯಕ್ತಿಕೌಶಲವನ್ನು ಉಪಯೋಗಿಸುವಲ್ಲಿ ಅಡ್ಡಿಯನ್ನುಂಟು ಮಾಡುತ್ತವೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಹೊಂದಿರುವ ತಜ್ಞವೈದ್ಯರಿಗೂ ಚಿಕಿತ್ಸಾ ಕ್ರಮದಲ್ಲಿ ಸವಾಲಾಗಿರುತ್ತವೆ. ಏಕೆಂದರೆ ನಿಖರವಾದ ಔಷಧಿಯ ಪ್ರಯೋಗಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಔಷಧಿ ಮಾಡಿದರೂ ಸ್ವಲ್ಪ ಸಮಯ ಕಾಯಿಲೆಯ ಚಿನ್ಹೆಗಳನ್ನು ಮರೆಮಾಚುತ್ತದೆ. ನಂತರ ಉಲ್ಬಣಗೊಂಡು ಹಿಂತಿರುಗುತ್ತದೆ. ಇದಕ್ಕೆ ವಿವರಣೆ ಅಥವಾ ಅರ್ಥ ಹೀಗೆ ನೀಡಬಹುದು. ಇವುಗಳು ವಾತಾವರಣ, ಸನ್ನಿವೇಶಗಳ ಹೊಂದಾಣಿಕೆಗೆ ಸಂಬಂಧಿಸಲ್ಪಟ್ಟಿವೆ. ಹೋಮಿಯೋಪಥಿ ಸಿದ್ಧಾಂತಗಳ ಪ್ರಕಾರ ರೋಗದ ಮೂಲ ವ್ಯಕ್ತಿಯಲ್ಲಿಯೇ ಇರುವುದರಿಂದ ಇದು ಮಯಸ್ಮ್ ಗೆ ಅನುಗುಣವಾಗಿ ತೋರ್ಪಡಿಸುತ್ತದೆ. ಇದಕ್ಕೆ ಪೂರಕ ಮಾಹಿತಿ ವ್ಯಕ್ತಿಯ ಕೌಟುಂಬಿಕ ರೋಗ ಹಿನ್ನೆಲೆ ಮತ್ತು ಅದಕ್ಕೆ ಈ ಹಿಂದೆ ನೀಡಿದಂತಹ ವೈದ್ಯಕೀಯ ಚಿಕಿತ್ಸೆ, ಭೌತಿಕ ಮತ್ತು ಮಾನಸಿಕ ವಾತಾವರಣವನ್ನು ಅವಲಂಬಿಸಿರುವುದು.
ಉದಾಹರಣೆಗೆ ಮೈಗ್ರನ್ ಕಾಯಿಲೆಯು ಮೆದುಳಿನ,ನರಮಂಡಲದ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆ. ಅದರ ಚಿನ್ಹೆಗಳಾದ ತಲೆಸಿಡಿತ, ವಾಕರಿಕೆ, ವಾಂತಿ, ತಲೆಸುತ್ತು, ಬೆಳಕು, ಶಬ್ಧ, ಜನಸಮೂಹದ ಅಸಹನೆ ಮತ್ತು ಅವುಗಳಿಂದ ಉಲ್ಬಣಾವಸ್ಥೆ ಇದ್ದರೂ ಅವು ಕ್ಷಣಿಕ ತೋರುವಿಕೆ. ಅದರ ಮೂಲ ಅದನ್ನು ಅನುಭವಿಸುವಂತಹ ವ್ಯಕ್ತಿಯ ಜೀವನ ಸನ್ನಿವೇಶಕ್ಕೆ ಆಧಾರಿತವಾಗಿದೆ. ಆ ನಿಭಾಯಿಸಲಾರದ ಒತ್ತಡ ಪರಿಸ್ಥಿತಿ ಮನೆಯಲ್ಲಿರಬಹುದು,ಶಾಲೆಯಲ್ಲಿರಬಹುದು, ಕಛೇರಿಯಲ್ಲಿರಬಹುದು, ನೆರೆಹೊರೆಯ ಸಮಾಜದಲ್ಲಿರಬಹುದು. ಅದರ ಸೂಕ್ತ ಪರಿಹಾರವನ್ನು ಮುಕ್ತವಾಗಿ ಚರ್ಚಿಸಿ, ಆಳವಾಗಿ ಅಧ್ಯಯನ ಮಾಡಿ , ವಾಸ್ತವಿಕ ಸಲಹೆಯ ಮುಖಾಂತರ ನೀಡಬಹುದು. onosmod, bell, glon,sil,gels ಇತ್ಯಾದಿ ಔಷಧಿಗಳ ಹೊಂದಾಣಿಕೆಯಿಂದ ಸಂಪೂರ್ಣ ಗುಣವನ್ನು ಪಡೆಯಬಹುದು.
ಇನ್ನೊಂದು ಉದಾಹರಣೆ ಇರಿಟೇಬಲ್ ಬವೆಲ್ ಸಿಂಡ್ರೋಮ್ ಅಂದರೆ ಪದೇಪದೇ ಕಂಡುಬರುವಂತಹ ಕರುಳಿನ ಉರಿಯೂತ ಪ್ರತಿರೂಪ. ಯಾವುದೇ ಮಲಪರೀಕ್ಷೆ,ಕರುಳಿನ ಕ್ಷಕಿರಣ ,ಅಲ್ಟ್ರಾಸೊನೊಗ್ರಫಿ, ಕೊಲೊನೊಸ್ಕೊಪಿ, ವೈದ್ಯಕೀಯ ಪರೀಕ್ಷೆಗಳೂ ನಿಖರ ಮಾಹಿತಿಯನ್ನು ನೀಡಲು ವಿಫಲವಾಗುತ್ತವೆ. ಆದರೆ ವ್ಯಕ್ತಿಯು ಪದೇಪದೇ ಅತಿಸಾರ,ಜೀರ್ಣಾಗೊಳ್ಳದ ಅಹಾರಮಿಶ್ರಿತ ಮಲ, ರಕ್ತ ಮಿಶ್ರಿತ ಮಲ, ಸಿಂಬಳಯುಕ್ತ ಮಲ, ಕೆಲವೊಮ್ಮೆ ಮಲಬದ್ಧತೆಯಿಂದಾಗಿ ಸಂಕಟಪಡುತ್ತಾನೆ. ದೇಹ ಪ್ರಕೃತಿಯಲ್ಲಿ ಕ್ಷೀಣಿಸುತ್ತಾನೆ. ಅಧ್ಯಯನಗಳ ಪ್ರಕಾರ ಇದು ಮನೋದೈಹಿಕ ಕಾಯಿಲೆ. ಈ ಹಿಂದೆ ವಿವರಿಸಿದಂತೆ ಮೂಲ ಕಾರಣವನ್ನು ಆಧರಿಸಿ, ಪರಿಹಾರ ಸಲಹೆಗಳನ್ನು ನೀಡಿ ಹೋಮಿಯೋಪಥಿ ಔಷಧಿಗಳಾದ Arg.nit, gels,nat.mur,phos,lyco ಇತ್ಯಾದಿಗಳಲ್ಲಿ ಸಮಗುಣತತ್ವವುಳ್ಳದ್ದನ್ನು ನೀಡಿ ರೋಗಮುಕ್ತನಾಗಿ ಮಾಡಬಹುದು.
ಇದೇ ರೀತಿಯಲ್ಲಿ ರೋಗಗಳ ಮೂಲ ಸ್ವರೂಪವನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳ ಸಮಗ್ರ ಮಾಹಿತಿಯನ್ನು ಒಟ್ಟುಗೂಡಿಸಿ ಸಮಗುಣತತ್ವವುಳ್ಳ ಹೋಮಿಯೋಪಥಿ ಔಷಧಿಯನ್ನು ನೀಡುವುದರಿಂದ ಮನೋದೈಹಿಕ ಕಾಯಿಲೆಗಳ ಮೂಲಸ್ವರೂಪವನ್ನೇ ನಿರ್ಮೂಲನಗೊಳಿಸಬಹುದು.