Consultant Homeopathic Physician

ಮಹಿಳೆಯರ ಕಾಯಿಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸೆ

ಸ್ತ್ರೀಯರಲ್ಲಿ ಋತುಚಕ್ರಕ್ಕೆ ಅನುಸಾರವಾಗಿ ವಿವಿಧ ದೈಹಿಕ ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ. ಅದರಂತೆ ಸ್ತ್ರೀಯ ಜೀವನವನ್ನು ಹದಿಹರೆಯ, ಗೃಹಿಣಿ ಅಥವಾ ಸಂತಾನೋತ್ಪತ್ತಿ ಮತ್ತು ಋತುಬಂಧ ಎಂಬುದಾಗಿ ವಿಂಗಡಿಸಬಹುದು. ಇವುಗಳು ಎಲ್ಲಾ ಸ್ತ್ರೀಯರಲ್ಲೂ ಸಮಾನವಾಗಿ ಇರುವುದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ತರಹ ಕಂಡು ಬರುತ್ತವೆ. ಅದರಿಂದಲೇ ಅವು ವ್ಯಕ್ತಿಗತ ಚಿನ್ಹೆಗಳಾಗಿ ಪ್ರತಿಯೊಂದು ಸ್ತ್ರೀಯನ್ನು ತಮ್ಮದೇ ರೀತಿಯಲ್ಲಿ ಬೇರ್ಪಡಿಸುತ್ತವೆ.

ಹದಿಹರೆಯದಲ್ಲಿ ಮುಟ್ಟಿನ ಏರುಪೇರುಗಳು ಮತ್ತು ಮನಸ್ಸಿನ ಕ್ಲೇಶಗಳು ಸಾಮಾನ್ಯವಾಗಿ ಉಂಟಾಗುವಂತಹ ತೊಂದರೆಗಳು. ಮುಟ್ಟಿನ ಏರುಪೇರುಗಳಲ್ಲಿ ಅತಿಸ್ರಾವ, ನಿಮ್ನ ಸ್ರಾವ, ದಪ್ಪವಾಗುವಿಕೆ, ಮೊಡವೆಮೂಡುವಿಕೆ ಮುಂತಾದವುಗಳು ಕಂಡುಬರುತ್ತವೆ. ಋತುಸ್ರಾವದ ಆರಂಭದಲ್ಲಿ oestrogen ಮತ್ತು progesteron ಹಾರ್ಮೋನ್ ಗಳ ಅಸಮತೋಲನೆಯಿಂದ ಮತ್ತು ಇದರ ಬಗ್ಗೆಸರಿಯಾದ ಮಾಹಿತಿಯ ಕೊರತೆಯಿಂದ, ತಪ್ಪು ಕಲ್ಪನೆಗಳಿಂದ ಹೆಣ್ಣುಮಕ್ಕಳು ಮಾನಸಿಕ ಒತ್ತಡಕ್ಕೊಳಗಾಗುತ್ತಾರೆ. ಸರಿಯಾದ ಮಾರ್ಗದರ್ಶನ ಇರದ ಸಂದರ್ಭದಲ್ಲಿ ಸಹಜಕ್ರಿಯೆಯೂ ರೋಗದ ಸ್ವರೂಪವನ್ನು ಪಡೆಯುತ್ತದೆ. ತೀವ್ರವಾದ ಕಿಬ್ಬೊಟ್ಟೆ ನೋವು, ಸೊಂಟನೋವು, ತೊಡೆಕಾಲುಗಳ ಸೆಳೆತ ಮುಂತಾದ ಸಾಮಾನ್ಯ ಚಿನ್ಹೆಗಳು ದೈನಂದಿನ ಕೆಲಸಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಕೆಲವರಲ್ಲಿ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿ, ಅತಿಬೇಧಿ, ಮೊಡವೆಗಳ ಉಲ್ಬಣ, ಪೈಲ್ಸ್ ತರಹದ ಚಿನ್ಹೆಗಳು ಇತ್ಯಾದಿ ಕಂಡುಬರುತ್ತವೆ. ಮುಟ್ಟಿನ ಸಂದರ್ಭದಲ್ಲಿ ಮಾನಸಿಕ ಕಿರಿಕಿರಿ, ಉದ್ವೇಗ, ಸಿಡುಕು, ಅಂಜಿಕೆ ಇತ್ಯಾದಿ ತೊಂದರೆಗಳನ್ನೂ ಕೆಲವರಲ್ಲಿ ಕಾಣಬಹುದು. ಇವೆಲ್ಲ ಸಮೂಹಚಿನ್ಹೆಗಳನ್ನು ಒಟ್ಟುಗೂಡಿಸಿ ಸಮಗುಣತ್ವವುಳ್ಳ ಹೋಮಿಯೋಪಥಿ ಔಷಧಿಯನ್ನು ಸೇವಿಸಿದಲ್ಲಿ ಸಹಜದೈಹಿಕ ಕ್ರಿಯೆಯಾದ ಋತುಸ್ರಾವದ ದಿನಗಳು ಉಲ್ಲಾಸಕರವಾಗಿರುವುದು. puls, colo, mag phos, cocc. ind, amm.carb, sep ಮುಂತಾದ ಔಷಧಿಗಳು ಬಹಳ ಪರಿಣಾಮಕಾರಿ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಋತುಸ್ರಾವದ ಸಂದರ್ಭದಲ್ಲಿ ಒಂದೊಂದು ಚಿನ್ಹೆಗಳಿಗೆ ಮಾತ್ರ ಮಹತ್ವ ಕೊಡಬಾರದು. ಸ್ತ್ರೀಯಲ್ಲಿ ಕಂಡುಬರುವ ಎಲ್ಲಾ ಚಿನ್ಹೆಗಳನ್ನೂ ಗಮನದಲ್ಲಿಟ್ಟುಕೊಂಡು ಆರೈಕೆಯನ್ನು ಮಾಡಬೇಕು. ಏಕೆಂದರೆ polycystic ovarian disease/syndrome ನಲ್ಲಿ ಮುಟ್ಟಿನ ಏರುಪೇರಿನೊಂದಿಗೆ ಮೊಡವೆಗಳು, ಬೊಜ್ಜುತನ, ಅಂಡಾಣು ಬಿಡುಗಡೆಯ ಅನಿಶ್ಚಿತತೆ ಗಳು,ಥೈರಾಯ್ಡ್ ಸಮಸ್ಯೆಗಳು ಕಂಡುಬರುತ್ತವೆ. ಹೋಮಿಯೋಪಥಿಯ ವ್ಯಕ್ತಿಗತಪರಿಪೂರ್ಣ ಚಿಕಿತ್ಸೆಯ ಪರಿಕಲ್ಪನೆಯಿಂದ ಇಂತಹ ಹಾರ್ಮೋನ್ ಸಮಸ್ಯೆಗಳನ್ನು ಪರಿಹರಿಸಬಹುದು.

ಸಂತಾನೋತ್ಪತ್ತಿ ಮತ್ತು ಬಾಣಂತಿ ಸಮಸ್ಯೆಗಳಿಗೆ ಹೋಮಿಯೋಪಥಿಯಲ್ಲಿ ಉಪಯುಕ್ತ ಚಿಕಿತ್ಸೆಯಿದೆ. ಇದು ಅಂಗಾಂಗ ಕ್ರಿಯೆಗಳಲ್ಲಿಯ ವೈಪರೀತ್ಯವಾಗಿರಬಹುದು ಅಥವಾ ಆಧುನಿಕ ಯಾಂತ್ರೀಕೃತ ಜೀವನಶೈಲಿಯ ಮಾನಸಿಕ ಒತ್ತಡ,ಸಂಧಿಗ್ಧ ಪರಿಸ್ಥಿತಿಯಾಗಿರಬಹುದು. ಇವುಗಳನ್ನು ಕೂಲಂಕುಷವಾಗಿ ಪರಿಶೀಲಿಶಿ ಸೂಕ್ತ ಹೋಮಿಯೋಪಥಿ ಔಷಧಿಗಳಾದ Sep, Nat mur,Phos,Plat ಇತ್ಯಾದಿಗಳನ್ನು ಪರಿಗಣಿಸಬಹುದು.
ತಾಯ್ತನವು ಸ್ತ್ರೀಯ ಅವಿಭಾಜ್ಯ ಹಕ್ಕು ಮತ್ತು ಅನುಭವಿಸುವಂತಹ ಸೌಭಾಗ್ಯ. ಸ್ತ್ರೀತ್ವದ ಪರಿಪೂರ್ಣತೆ ತಾಯ್ತನದಲ್ಲಿಯೇ ಎಂದರೆ ತಪ್ಪಗಲಾರದು. ತಾಯ್ತನದ ಅರೋಗ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಕೂಡ ವಿಶೇಷ ಆಸಕ್ತಿ ವಹಿಸಿದೆ. ನಿಸರ್ಗದ ಸಹಜಕ್ರಿಯೆಯಾದ ಗರ್ಭಾವಸ್ಥೆಯಲ್ಲಿ ಅದಕ್ಕೆ ಪೂರಕವಾಗುವಂತಹ ಪಾರ್ಶ್ವಪರಿಣಾಮವಿಲ್ಲದ ಔಷಧಿಗಳನ್ನು ನೀಡುವುದರಿಂದ ತಾಯಿಯ ಮತ್ತು ಶಿಶುವಿನ ದೇಹಾರೋಗ್ಯವನ್ನು ಸಂವರ್ಧಿಸಬಹುದು. ಗರ್ಭಿಣಿ ಯರಲ್ಲಿ ಕಂಡುಬರುವಂತಹ ಅತಿವಾಕರಿಕೆ, ಉರಿಮೂತ್ರ ಅಥವ ಸೋಂಕು, ಮಲಬದ್ಧತೆ ಮತ್ತು ಪೈಲ್ಸ್, ರಕ್ತಹೀನತೆ ಇತ್ಯಾದಿ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು symphor. rac, canth, collins, bry,ipec,nux vom ಹೋಮಿಯೋಪಥಿ ಔಷಧಿಗಳನ್ನು ತಜ್ಞ ವೈದ್ಯರ ಸಲಹೆಯ ಮೇರೆ ಉಪಯೋಗಿಸಬಹುದು.
ಋತುಬಂಧ ಮಹಿಳೆಯರಲ್ಲಿ ಅಂತಿಮ ಘಟ್ಟ. ಸಹಜ ಮುಟ್ಟಿನ ಕ್ರಿಯೆಯು ತನ್ನಿಂತಾನೆ ಸ್ಥಗಿತ ಗೊಂಡು ಸ್ತ್ರೀತ್ವದ ಕೊನೆಯಹಂತ. ಯಾವ ಜೀವನವು ಆಕರ್ಷಣೆಯ ಕೇಂದ್ರಬಿಂದುವಾಗಿತ್ತೋ ಅದು ನಿಧಾನವಾಗಿ ಕರಗುವಂತಹ ಸಮಯ. ಹಾರ್ಮೋನ್ ಗಳ ಬದಲಾವಣೆಯಲ್ಲಿನ ಏರುಪೇರು ಸ್ತ್ರೀತ್ವದಲ್ಲಿ ಹೊಸ ಜೀವನಶೈಲಿಯನ್ನುನೀಡುತ್ತದೆ. ಈ ಬದಲಾವಣೆಯು ಕೆಲವರಲ್ಲಿ ಸಹ್ಯ, ಮತ್ತೆ ಕೆಲವರಲ್ಲಿ ಮಾನಸಿಕ ಒತ್ತಡವನ್ನು ನೀಡುತ್ತದೆ. ದೈಹಿಕವಾಗಿ ಅಸಹಜ ಪ್ರಕ್ರಿಯೆಗಳಾದ ಅನಿಶ್ಚಿತ ಬೆವರುವುದು, ಚಳಿಯಾಗುವುದು,ಬೆಂಕಿಯಂತೆ ಉರಿಬರುವುದು, ಖಿನ್ನತೆ, ಸಿಡುಕು, ಉದ್ವೇಗ, ಭ್ರಮನಿರಸನ,ಜೀವನದ ಆಗುಹೋಗುಗಳಲ್ಲಿಯ ನಿರಾಸಕ್ತಿ ಕಂಡುಬರುತ್ತವೆ. ಇವಕ್ಕೆ ಸೂಕ್ತ ಪರಿಹಾರ ಬದಲಾವಣೆಯನ್ನು ಸ್ವೀಕರಿಸುವುದು. ಆದರೂ ಕೆಲವರಲ್ಲಿ ಇದು ಕಷ್ಟಸಾಧ್ಯ. ಅಂತಹ ಸಂದರ್ಭದಲ್ಲಿಮನಸ್ಸಿನ ಕ್ಲೇಶಗಳಿಗೆ ಸೂಕ್ತ ಸಲಹೆಗಳೊಂದಿಗೆ ಹೋಮಿಯೋಪಥಿ ಔಷಧಿಗಳಾದ lach, sep, kali carb, mag.carb ಗಳನ್ನು ಗುರುತಿಸಿ ನೀಡಿ ಸಾಂದರ್ಭಿಕ ಒಳಿತನ್ನು ನೀಡಬಹುದು.

ಗರ್ಭಕೋಶದ, ಅಂಡಾಶಯದ ಅಥವಾ ಸ್ತನದ ಗಡ್ಡೆಗಳು ಯಾ ಅರ್ಬುದ ಕಾಯಿಲೆಗಳಿಗೂ Phyt, conium, frax.am,aster rub ಮುಂತಾದ ಔಷಧಿಗಳನ್ನು ಉಪಯೋಗಿಸಿ ತೊಂದರೆಗಳನ್ನು ಶಮನಗೊಳಿಸಬಹುದು.
ಹೋಮಿಯೋಪಥಿಯು ಸ್ತ್ರೀಯರ ಸಮಸ್ಯೆಗಳಲ್ಲಿ ಸಾಂದರ್ಭಿಕವಾಗಿ ಪಾರ್ಶ್ವಪರಿಣಾಮಗಳಿಲ್ಲದೆ ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ.

Get online consultation

Online Appoinment

Homeopathy is a form of alternative medicine in which practitioners claim to treat patients using highly...

Make A Appointment
Visit my Clinic

Consultation

5.30pm – 8.30pm
Except Tuesday and Sunday.

Consultation only by prior appointment.

Conatct Us
why Homeopathy ?

Benefits of Homeopathy

Homoeopathy may be defined as the Therapeutic Method of Symptom-Similarity....

Know More